ಅನ್ನ-ಅಕ್ಷರ-ಆರೋಗ್ಯ-ಆಧ್ಯಾತ್ಮ ದಾಸೋಹಗಳ ಮೂಲಕ ಈ ನಾಡಿನ, ನಾಡವರ ಅಭಿಮಾನದ
“ನಮ್ಮ ಗವಿಮಠ ” ವಾಗಿದೆ.
ಶ್ರೀ ಮಠದ ಪರಂಪರೆಯ ಶಿವಯೋಗಿಗಳೆಲ್ಲವರ ಬದುಕು ಎಡಗೈಯಲ್ಲಿ ಇಷ್ಟಲಿಂಗ, ಬಲಗೈಯಲ್ಲಿ ಭಕ್ತನ ಬದುಕು, ಅವರದು ಭಕ್ತರಿಗಾಗಿ ಬದುಕಿದ ಬದುಕು.16ನೇ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಮರಿಶಾಂತವೀರ ಶಿವಯೋಗಿಗಳವರು ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟನ್ನು ಸಂಸ್ಥಾಪಿಸಿ ತನ್ಮೂಲಕ ವಿದ್ಯಾ ಪ್ರಸರಣದಂತಹ ಮಹಾಕಾಯಕವನ್ನೇ ಕೈಗೊಂಡರು ಜೊತೆಗೆ ಉಚಿತ ವಸತಿ ಹಾಗೂ ಪ್ರಸಾದ ನಿಲಯವನ್ನು ಪ್ರಾರಂಭಿಸಿ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಮನ್ವಂತರವನ್ನೇ ಆರಂಭಿಸಿದರು.
ಕೇವಲ ಕೆಲವೆ ವಿದ್ಯಾರ್ಥಿಗಳಿಂದ ಆರಂಭವಾದ ಸಂಸ್ಥೆ ಇಂದು ಸಹ್ರಸಾರು ವಿದ್ಯಾರ್ಥಿಗಳ ಬದುಕಿಗೆ ವಸತಿ ಸ್ಥಾನವಾಗಿದೆ. ಸುಸಜ್ಜಿತ ಗ್ರಂಥಾಲಯ ಸಹಸ್ರಾರು ಏಕಕಾಲಕ್ಕೆ ಕುಳಿತು ಭೋಜನ ಸ್ವೀಕರಿಸುವ ವಿಶಾಲ ಭೋಜನಾಲಯ ಮೂಲಸೌಕರ್ಯಗಳ ವ್ಯವಸ್ಥೆ ಪಠ್ಯೇತರ ಚಟುವಟಿಕೆಗಳಲ್ಲಿ ಬಾಗವಹಿಸಿರುವ ವಿದ್ಯಾರ್ಥಿಗಳಿಗಾಗಿ ವಿಶೇಷ ವ್ಯವಸ್ಥೆ ಹಾಗೂ ಎಲ್ಲ ರೀತಿಯ ವ್ಯವಸ್ಥೆಗನುಗುಣವಾಗಿ ಒಟ್ಟಾರೆಯಾಗಿ ಒಬ್ಬ ವಿದ್ಯಾರ್ಥಿ ಇಲ್ಲಿ ಪ್ರವೇಶ ಪಡೆದ ತರುವಾಯ ಆ ವಿದ್ಯಾರ್ಥಿಯ ಸರ್ವಾಂಗೀಣ ಅಭಿವೃದ್ಧಿಯನ್ನು ಕೈಗೊಳ್ಳುವ ಜೊತೆಗೆ ನಾಡಿನ ಮಹೋನ್ನತ ಆಸ್ತಿಯಾಗಬೇಕೆಂಬುದೇ ನಮ್ಮ ಮಹದಾಸೆಯಾಗಿದೆ.
|
2022-23ನೇ ಸಾಲಿನ ಒಟ್ಟು ವಿದ್ಯಾರ್ಥಿಗಳ ಜಿಲ್ಲಾವರು ಅಂಕಿಅಂಶಗಳು |
| ಜಿಲ್ಲೆಯ ಹೆಸರು | ಒಟ್ಟು ವಿದ್ಯಾರ್ಥಿಗಳು |
| ಕೊಪ್ಪಳ | :1624 |
| ಗದಗ | :273 |
| ಬಾಗಲಕೋಟೆ | :136 |
| ಧಾರವಾಡ | :56 |
| ಕಲಬುರ್ಗಿ | :43 |
| ಯಾದಗಿರಿ | :32 |
| ವಿಜಯಪುರ | :33 |
| ಬೆಳಗಾವಿ | :18 |
| ರಾಯಚೂರು | :623 |
| ಬಳ್ಳಾರಿ | :421 |
| ವಿಜಯನಗರ | :273 |
| ಚಿತ್ರದುರ್ಗ | :02 |
| ದಾವಣಗೇರಿ | :02 |
| ಹಾವೇರಿ | :08 |
| ಉತ್ತರ ಕನ್ನಡ | :02 |
| ಶಿವಮೊಗ್ಗ | :05 |
| ಆಂದ್ರಪ್ರದೇಶ | :7 |
| ಒಟ್ಟು | :3556 |
ವೈಶಿಷ್ಠತೆಗಳು
ಶ್ರೀ ಗವಿಮಠದ ಉಚಿತ ವಸತಿ ಮತ್ತು ಪ್ರಸಾದದ ನಿಲಯವು, ವಿಸ್ತಾರವಾದ ಅಡುಗೆ ಕೊಣೆ ಹೊಂದಿದೆ. ಅಡುಗೆ ತಯಾರಿಕೆಗೆ ಬೇಕಾದ ಸುವ್ಯವಸ್ಥಿತ ಗಾಳಿ, ಬೆಳಕು ಬರುವಂತೆ ಪೂರ್ವ ಯೋಜನೆಯಲ್ಲಿಯೇ ನಿರ್ಮಿಸಲಾಗಿದೆ. ಸದಾ ಸ್ವಚ್ಛತೆ ತುಂಬಿದ ವಾತವರಣವಿದ್ದು ರುಚಿ ಮತ್ತು ಶುಚಿಯಾದ ಆಹಾರ ತಯಾರಾಗುವುದು ಈ ವಸತಿ ನಿಲಯದ ವಿಶೇಷತೆ. ನಿತ್ಯ 5000 ವಿದ್ಯಾರ್ಥಿಗಳ ಈ ಪಾಕಶಾಲೆಯ ಸವಿಯನ್ನು ಸವಿಯುತ್ತಾರೆ. ಅಲ್ಲದೇ ಪ್ರತಿ ಸೋಮವಾರ ಹೆಚ್ಚು ಅಮಾವಾಸ್ಯೆಯ ಸಂದರ್ಭದಲ್ಲಿ ವಿಶೇಷ ಭೋಜನಕ್ಕೆ ಪ್ರಸಾದನಿಲಯ ಸಾಕ್ಷಿಯಾಗುತ್ತದೆ. ಮಕ್ಕಳ ಮನೋ ಇಂಗಿತವಾಗಿ ಆಹಾರ ತಯಾರಿಸುವ ವಾರದ ಉಪಹಾರ ಮತ್ತು ಪ್ರಸಾಸದದ ಪಟ್ಟಿ ಸಿದ್ದಗೊಂಡಿರುತ್ತದೆ. ಸಂತುಲಿತವಾದ, ಪೌಷ್ಠಿಕವಾದ ನಿತ್ಯ ಉಪಹಾರಗಳಾದ ಉಪ್ಪಿಟ್ಟು ಮತ್ತು ಸಿರಾ, ಗೊಧಿಹುಗ್ಗಿ, ಚಪಾತಿ, ಅನ್ನ-ಸಾಂಬರು, ಪುಡಿಚಟ್ನಿ, ಇಡ್ಲಿ ಇತ್ಯಾದಿ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಆಧುನಿಕ ಯಂತ್ರೋಪಕರಣಗೊಳಿಸಿ ಆಹಾರ ತಯಾರಿಕೆಯಲ್ಲಿ ಸ್ವಚ್ಛತೆ ಕಾಪಾಡುವುದು ಈ ವಸತಿ ನಿಲುಯದ ಆಕರ್ಷಣೆಗಳಲ್ಲಿ ಒಂದು.
ರುಚಿಯಾದ ಆಹಾರ ತಯಾರಿಕೆಗೆ ಆಧ್ಯತೆ ನೀಡುವ ಸಂಸ್ಥಾನ ಶ್ರೀ ಗವಿಮಠವು ಗುಣಮಟ್ಟದ ಪೌಷ್ಠಿಕಭರಿತ ಪ್ರಸಾದ ನೀಡುವುದುರಲ್ಲಿ ಸೈ ಎನಿಸಿಕೊಂಡಿದೆ. ನಿತ್ಯ ಉಪಹಾರದಲ್ಲಿ ಉಪ್ಪಿಟ್ಟು, ಇಡ್ಲಿ, ಪುಳಿಯೊಗರೆಯಾದರೆ ಊಟಕ್ಕೆ ಪ್ರತಿ ದಿನ ಗುಣಮಟ್ಟದ ಅನ್ನ, ಹುಗ್ಗಿ, ಬೆಳೆ ಸಾಂಬರು, ಚಪಾತಿ, ರೊಟ್ಟಿ, ಪುಡಿ ಚಟ್ನಿ, ಉಪ್ಪಿನಕಾಯಿ ಮುಂತಾದವು ಪ್ರಸಾದ ನಿಲಯದ ಭಕ್ಷ್ಯಗಳು. ಗುಣಮಟ್ಟದ ತರಕಾರಿ ಹಾಗೂ ಬೆಳೆಕಾಳುಗಳನ್ನು ಬಳಸುವುದು ಗಮನಿಸಿದರೆ ಮನೆಗಳಿಗೂ ಮೀರಿಸುವ ಪದಾರ್ಥ ವ್ಯವಸ್ಥೆ ಇಲ್ಲಿ ಕಂಡುಬರುವುದು ಈ ಪ್ರಸಾದ ನಿಲಯದ ಶ್ರೇಷ್ಠತೆಯಾಗಿದೆ. ಮತ್ತು ಅಡುಗೆಗೆ ಸಂಸ್ಕರಿಸಿದ ಶುದ್ಧ ನೀರಿನ ಘಟಕದ ನೀರನ್ನು ಬಳಸುವುದು ಈ ವಸತಿ ನಿಲಯದ ಮಹತ್ವಗಳಲ್ಲಿ ಒಂದು. ಒಟ್ಟಿನಲ್ಲಿ ರುಚಿ-ಶುಚಿಯಾದ ಆಹಾರ ತಯಾರಿಸಿ ಮಕ್ಕಳಿಗೆ ಬಡಿಸುವುದು ಶ್ರೀಮಠದ ಪ್ರಸಾದ ನಿಲಯದ ಮಹತ್ವದ ಹೆಜ್ಜೆಯಾಗಿದೆ.
ಭಕ್ತರಲ್ಲಿ ಭಗವಂತನ ಕಾಣುವ ಶ್ರೀಗವಿಮಠವು ಪ್ರಸಾದ ನಿಲಯದ ಮಕ್ಕಳಲ್ಲಿ ಗವಿಸಿದ್ಧನನ್ನೇ ಕಾಣುತ್ತದೆ. ಆದ್ದರಿಂದ ಪ್ರಸಾದ ನಿಲಯಕ್ಕೆ ಪ್ರವೇಶ ಪಡೆದ ಮಕ್ಕಳ ಆರೋಗ್ಯ ಜವಬ್ದಾರಿ ನಿಬಾಯಿಸುವಲ್ಲಿ ಪ್ರಮುಖ ಆಧ್ಯತೆ ನೀಡಿದೆ. ಉಚಿತ ಮತ್ತು ಪ್ರಸಾದ ನಿಲಯದಲ್ಲಿ ವೈಧ್ಯಕೀಯ ಕೇಂದ್ರವನ್ನೆ ತೆರೆದಿದೆ. ಪ್ರತಿ ಮಗುವಿನ ಆರೋಗ್ಯದಲ್ಲಿ ಸ್ವತಃ ಕಾಳಜಿ ವಹಿಸುವುದಕ್ಕೆ ನಿತ್ಯ ಕರ್ತವ್ಯದ ವೈಧ್ಯರನ್ನು ನೇಮಕ ಮಾಡಿದೆ. ಪ್ರಥಮ ಚಿಕಿತ್ಸಗೆ ಬೇಕಾಗುವ ಎಲ್ಲಾ ವೈಧ್ಯಕೀಯ ಸೌಲಭ್ಯ ಕಲ್ಪಿಸಿದೆ. ಮಕ್ಕಳ ಆರೋಗ್ಯ ಸುಧಾರಣೆಗಾಗಿ ಆರೋಗ್ಯ ಶಿಬಿರ ಹಮ್ಮಿಕೊಳ್ಳುವುದು, ಹವಮಾನ ವೈಪರಿತ್ಯಗಳಿಗೆ ಮುಂಜಾಗೃತೆ ಕ್ರಮಗಳನ್ನು ಕೈಗೊಳ್ಳುವುದು, ಪ್ರತಿ ಮಗುವಿನ ವೈಯಕ್ತಿಕ ಆರೋಗ್ಯ ಕಾಳಜಿ ವಹಿಸಿ, ತಮ್ಮ ಮನೆಯ ಮಕ್ಕಳಂತೆ ಆರೋಗ್ಯ ಕಾಪಾಡಿಕೊಳ್ಳುವಂತೆ ಪ್ರೇರೆಪಿಸುವುದು. ಮಕ್ಕಳು ಆರೋಗ್ಯವಾಗಿರುವಂತೆ ನೋಡಿಕೊಳ್ಳುವುದು ಉಚಿತ ವಸತಿ ಹಾಗೂ ಪ್ರಸಾದ ನಿಲಯದ ಆಕರ್ಷಣೆಗಳಲ್ಲಿ ಒಂದಾಗಿದೆ.
ಶ್ರೀಗವಿಮಠ ಉಚಿತ ವಸತಿ ಮತ್ತು ಪ್ರಸಾದ ನಿಲಯದಲ್ಲಿ ಮಹಾಪ್ರಸಾದ ನಿಲಯವಿದ್ದು ಏಕಕಾಲಕ್ಕೆ ಸಹಸ್ರಾರು ಸಾವಿರ ವಿದ್ಯಾರ್ಥಿಗಳು ಪ್ರಸಾದ ಸೇವಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಅತ್ಯಾಧುನಿಕವಾದ ಹತ್ತು ಬಾಯ್ಲರ್‍ಗಳಿದ್ದು ಸಾಂಬರ ಮತ್ತು ಅನ್ನ ಸಿದ್ದಮಾಡಲು ಬಾಯ್ಲರಗಳನ್ನು ಬಳಸಲಾಗುತ್ತದೆ. ಇಡ್ಲಿ ತಯಾರಿಕೆಗೂ ಯಂತ್ರವಿದೆ. ಗ್ಯಾಸ್ ಸಿಲೆಂಡರ್ ಜೊತೆಗೆ ಸೋಲಾರ್ ವ್ಯವಸ್ಥೆ ಕಲ್ಪಿಸಿರುವುದು ಈ ವಸತಿ ನಿಲಯದ ವಿಶೇಷತೆ. ತರಕಾರಿ ಯಂತ್ರವಿದೆ. ಮಕ್ಕಳ ವಸತಿಗೆ ಅನುಕೂಲವಾಗಲು ವಿಶಾಲವಾದ ಕೋಣೆಗಳನ್ನು ನಿರ್ಮಿಸಲಾಗಿದ್ದು, ಗಾಳಿ-ಬೆಳಕಿನ ಕೊರತೆಯಾಗದಂತೆ ಸಿದ್ದಗೊಂಡಿರುವುದು ಈ ವಸತಿ ನಿಲಯದ ಅತ್ಯದ್ಭುತ. ವಿದ್ಯಾರ್ಥಿಗಳು ಮಲಗುವುದಕ್ಕೆ ಮಂಚಗಳು, ಇಪ್ಪತ್ನಾಲ್ಕು ಗಂಟೆಗಳ ವಿದ್ಯುತ್ ಸರಬರಾಜು ಹೊಂದಿದೆ. ವಿದ್ಯುತ್ ಇಲ್ಲದ ಸಂದರ್ಭದಲ್ಲಿ ಜನರೇಟರ್ ವ್ಯವಸ್ಥೆಇದೆ. ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಅಧ್ಯಯನಕ್ಕೆ ಪ್ರತ್ಯೇಕ ಹಾಲ್ ವ್ಯವಸ್ಥೆ ಕಲ್ಪಿಸಲಾಗಿದೆ. ಮಕ್ಕಳ ದಟ್ಟಣೆ ನಿವಾರಿಸಲು ದೊಡ್ಡ-ದೊಡ್ಡ ಕಾರಿಡಾರ್ ನಿರ್ಮಿಸಲಾಗಿದ್ದು, ಮುಖ್ಯವಾಗಿ ನೈರ್ಮಲ್ಯಕರಣದಿಂದ ಕೂಡಿರುವ ಶೌಚಾಲಯ ವ್ಯವಸ್ಥೆಯನ್ನು ಈ ವಸತಿ ನಿಲಯವು ಹೊಂದಿದೆ.
ಶ್ರೀಮಠದ ವಸತಿ ನಿಲಯಕ್ಕೆ ಪ್ರವೇಶ ಪಡೆಯುವ ಮೂಲ ಉದ್ದೇಶವೇ ಸಂಸ್ಕಾರ. ಶಿಸ್ತುಬದ್ಧ ಜೀವನ ರೂಪಿಸಿಕೊಳ್ಳಲು. ಶ್ರೀಮಠದ ಪ್ರಸಾದ ನಿಲಯದಲ್ಲಿ ಬೆಳೆದ ಮಗು ಸಂಸ್ಕಾರವಂತನಾಗುತ್ತಾನೆ ಎಂಬ ಬಲವಾದ ನಂಬಿಕೆ ಪೋಷಕರಿಗೆ ಇದೆ. ಕಾರಣ ಇಲ್ಲಿ ಪ್ರವೇಶ ಬಯಸುವ ವಿದ್ಯಾರ್ಥಿಗಳು ಶಿಸ್ತಿನ ಜೀವನ ರೂಪಿಸಿಕೊಳ್ಳುವಲ್ಲಿ ಸಂದೇಹವಿಲ್ಲ. ಬೆಳಿಗ್ಗೆ ಬೇಗನೆ ಏಳುವುದು, ಪ್ರಾರ್ಥನೆ, ಯೋಗ, ಧ್ಯಾನ, ಸೂರ್ಯೋದಯದ ಮುನ್ನ ಸ್ನಾನ, ಸಾಯಂಕಾಲ, ಮನೆ ಪಾಠದ ಕೆಲಸ, ಪ್ರಸಾದ ಇವು ದಿನನಿತ್ಯದ ಕರ್ಮಾಧಿಗಳು. ವಾರಕ್ಕೊಮ್ಮೆ ಉಪದೇಶಾಮೃತ ಹೇಳಿಸುವುದು, ಪ್ರತಿ ಅಮಾವಾಸೆಯ ಬೆಳಕಿನಡೆಯ ಕಾರ್ಯಕ್ರಮದಲ್ಲಿ ಅನುಭಾವಿಗಳ ಉಪನ್ಯಾಸ ಆಲಿಸುವುದಕ್ಕೆ ಅವಕಾಶ ಕಲ್ಪಿಸುವುದು. ನಿತ್ಯ ವೇದ, ಮಂತ್ರ, ಶ್ಲೋಕ, ಪಠಣ ಈ ವಸತಿ ನಿಲಯದಲ್ಲಿ ಸಾಮಾನ್ಯ. ಶುಭ್ರವಾದ ಬಿಳಿ ಬಟ್ಟೆ ಧರಿಸುವುದು ವಸತಿ ನಿಲಯದಲ್ಲಿಯೇ ಪ್ರತ್ಯೇಕ ಸಮವಸ್ತ್ರ ಧರಿಸುವ ವ್ಯವಸ್ಥೆ ಇದೆ. ಗುರು-ಹಿರಿಯರನ್ನು ಗೌರವಿಸುವ ಪದ್ಧತಿ, ವಿಧೇಯತೆಯ ಪರಿಪಾಠ, ನಯ-ವಿನಯ ಭಕ್ತಿಯಿಂದ ಪ್ರಸಾದ ಸೇವನೆ ಮುಂತಾದವುಗಳು ವಿದ್ಯಾರ್ಥಿಗಳನ್ನು ಉತ್ತಮ ವ್ಯಕ್ತಿತ್ವದ ವ್ಯಕ್ತಿಯಾಗಿ ಪರಿವರ್ತಿಸದೇ ಇರವು.
ಬನ್ನಿ ಅಕ್ಷರ ಜೋಳಿಗೆಯ ಈ ಅಭಿಯಾನಕ್ಕೆ ಕೈ ಜೋಡಿಸಿ
ಸಂರ್ಪಕ ವಿಳಾಸ - Contact Address
Location:
Samsthan Shree Gavimath Campus, Koppal-583231
Email:
srigavimathkoppal@gmail.com
Call:
08539-220212
